ಅಶ್ವಿನಿ ನಕ್ಷತ್ರದ ಜೆ.ಕೆ. ಹೆಂಡ್ತಿ, ಕೃಷ್ಣಲೀಲಾದ ಲವ್ಲಿ ಹುಡುಗಿ, ಇಷ್ಟಕಾಮ್ಯದ ಬೆಡಗಿ ಮಯೂರಿ ಎಲ್ಲರಿಗೂ ಗೊತ್ತಿರಲೇಬೇಕು. ತಮ್ಮ ಹೊಸ ಚಿತ್ರ ನಟರಾಜ ಸರ್ವಿಸ್ ಬಿಡುಗಡೆಯಾಗುವ ಸಂದರ್ಭದಲ್ಲಿ ಅವರು ವೆಬ್ ದುನಿಯಾ ಜತೆ ಮಾತನಾಡಿದ್ದಾರೆ.ನಟರಾಜ ಸರ್ವಿಸ್ ಕ್ಯಾರೆಕ್ಟರ್ ಬಗ್ಗೆ ಹೇಳಿ? ಸಿಂಪಲ್ ಹುಡುಗಿ ಪಾತ್ರ. ಸಹನಾ ಅನ್ನುವ ತುಂಬಾ ಸಹನೆಯಿರುವ ಹುಡುಗಿ ಪಾತ್ರ ನನ್ನದು. ಕಷ್ಟದಲ್ಲಿ ಬೆಳೆದ, ಅಪ್ಪ-ಅಮ್ಮನನ್ನು ಕಳೆದುಕೊಂಡ ಸ್ವಾವಲಂಬಿ ಪಾತ್ರ ನನ್ನದು. ನನ್ನ ಇತರ ಪಾತ್ರಗಳಿಗಿಂತ ಇದು ಭಿನ್ನವಾಗಿದೆ