ಕ್ರೇಜಿಸ್ಟಾರ್ ರವಿಚಂದ್ರನ್ ಎಂದೊಡನೆ ಕಣ್ಮುಂದೆ ಒಂದು ಮೋಹಕ ಪ್ರಪಂಚ ತೆರೆದುಕೊಳ್ಳುತ್ತದೆ. ಅದು ಅವರು ತಮ್ಮ ಇಮೇಜ್ ಮೂಲಕ ಸೃಷ್ಟಿಸಿರುವ ಪ್ರೇಮಲೋಕ. ಅದರೊಳಗೆ ಹೊಕ್ಕಾಗ ಸಿಕ್ಕ ಹೊಸ ರೀತಿಯ ಮಾತಿನ ರಸಪಾಕ ಇದು. ರವಿಚಂದ್ರನ್ ಸಾಮಾಜಿಕ ಜಾಲತಾಣಗಳಲ್ಲಿ ಕಾಣಿಸಿಕೊಳ್ಳುವುದು ತೀರ ಅಪರೂಪ. ಆದರೆ ಇತ್ತೀಚೆಗೆ ಯೂಟ್ಯೂಬ್, ಫೇಸ್ಬುಕ್ ಮೂಲಕ ಗುರುತಿಸಿಕೊಂಡಿದ್ದರು. ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹೆಸರು ಮಾಡುತ್ತಿರುವುದು ಎಂದರೆ ಕ್ಲಬ್ ಹೌಸ್. ತಕ್ಷಣ ಗುರುತಿಸಲಾಗದ ಹೆಸರಿನ ಮೂಲಕ ಅಲ್ಲಿಯೂ ಸಕ್ರಿಯರಾಗಿರುವ