ತಮ್ಮಅಭಿನಯದ ಪುಷ್ಪಕ ವಿಮಾನ ನವಂಬರ್ ತಿಂಗಳಿನಲ್ಲಿ ತೆರೆಕಾಣುತ್ತಿರುವ ಹಿನ್ನೆಲೆಯಲ್ಲಿ ನಟ, ನಿರ್ದೇಶಕ ರಮೇಶ್ ಅರವಿಂದ್ ಅವರನ್ನು ವೆಬ್ ದುನಿಯಾ ಮಾತನಾಡಿಸಿದಾಗ ಅವರು ಹೇಳಿದ್ದು ಹೀಗೆ:ಪುಷ್ಪಕ ವಿಮಾನ ಯಾವಾಗ ರಿಲೀಸ್? ನವಂಬರ್ ನಲ್ಲಿ ರಿಲೀಸ್. ಇದೊಂದು ಥರಾ ಹೃದಯವನ್ನು ಚಿವುಟುವ, ಭಾವನೆಗೆ ತಟ್ಟುವ ಸಿನಿಮಾ. ಬುದ್ಧಿಮಾಂದ್ಯ ಅಪ್ಪ ಮತ್ತು ಪುಟ್ಟ ಮಗಳ ನಿಷ್ಕಲ್ಮಷ ಹೃದಯಗಳ ಕತೆ. ಖಂಡಿತಾ ಈ ದಿನಗಳಿಗೆ ಇದೊಂದು ಹೊಸ ಪ್ರಯತ್ನ, ಹೊಸ ಕತೆ, ಹೊಸ ಸಿನಿಮಾ. ಒಂದೊಂದು