ಭಾರತೀಯ ನೌಕಾ ಪಡೆಯ ಕಮಾಂಡರ್ ಪ್ರದೀಪ್ ದೂಫಿಯಾ ಮತ್ತು ಮಾಂಪಿಧರ್ ದಂಪಿತಿಯ ಮಗಳಾಗಿ 1980ನೇ ಇಸವಿಯ ಆಗಸ್ಟ್ 27ರಂದು ಕೊಚ್ಚಿಯಲ್ಲಿ ನೆಹಾ ದೂಫಿಯಾ ಜನಿಸಿದಳು. ಮಿಸ್ ಇಂಡಿಯಾ-2002 ಪ್ರಶಸ್ತಿ ಮುಡಿಗೇರಿಸಿಕೊಂಡ ನೆಹಾ 2003ರಲ್ಲಿ ಕಾಯಮತ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದಳು. ಪ್ರಥಮ ಚಿತ್ರವೇ ಭರ್ಜರಿ ಗಳಕೆಯನ್ನು ಪಡೆಯಿತು. ನೆಹಾ ನಟನೆಯ ಎರಡನೇ ಚಿತ್ರ ಜೂಲಿ. ಇದರಲ್ಲಿ ವೇಶ್ಯೆಯ ಪಾತ್ರದಲ್ಲಿ ನಟಿಸಿದಳು. ಅದರ ನಂತರ 2005ರಲ್ಲಿ ಶಿಶಾ ಚಿತ್ರ ಫ್ಲಾಪ್ ಆಯಿತು.