ಬಾಲಿವುಡ್ ನಟ ಸಂಜಯ್ ಕಪೂರ್ 1965ನೇ ಇಸವಿಯ ಅಕ್ಟೋಬರ್ 17ರಂದು ಮುಂಬೈಯಲ್ಲಿ ಜನಿಸಿದರು. ಖ್ಯಾತ ಬಾಲಿವುಡ್ ನಟ ಅನಿಲ್ ಕಪೂರ್ನ ಸಹೋದರನಾದ ಸಂಜಯ್ ಕಪೂರ್ ಚಿತ್ರಜಗತ್ತಿನಲ್ಲಿ ತನ್ನದೇ ಆದ ಛಾಪು ಮೆರೆಯಲು ಸಾಧ್ಯವಾಗಲಿಲ್ಲ. ಆದರೆ ಕಳೆದ 15 ವರ್ಷಗಳಿಂದ ಸಿನೆಮಾ ರಂಗದಲ್ಲಿರುವ ಸಂಜಯ್ ಹಲವು ಹಿಟ್ ಚಿತ್ರಗಳನ್ನು ಬಾಲಿವುಡ್ಗೆ ಕೊಡುಗೆಯಾಗಿ ನೀಡಿದ್ದಾನೆ. 1995 ತೆರೆಕಂಡ ರಾಜಾ ಹಿಟ್ ಚಿತ್ರದ ನಂತರ ಸಂಜಯ್ ಅಭಿನಯಿಸಿದ ಮುಂದಿನ ಚಿತ್ರಗಳಾದ ಮೊಹಬ್ಬತ್, ಮೆರೆ ಸಪ್ನೋ