ನವದೆಹಲಿ: ಇದುವರೆಗೆ ಉದ್ದಿಮೆದಾರರ ಪರ ಎಂದೇ ಬಿಂಬಿತವಾಗಿದ್ದ ಕೇಂದ್ರದ ಮೋದಿ ಸರ್ಕಾರವನ್ನು ರೈತರ ಪರ ಎಂದು ಬದಲಾಯಿಸಲು ಈ ಬಜೆಟ್ ನಲ್ಲಿ ವಿತ್ತ ಸಚಿವರು ಪ್ರಯತ್ನಪಟ್ಟಿದ್ದಾರೆ. ರೈತರ ಕಲ್ಯಾಣವೇ ನಮ್ಮ ಗುರಿ ಎಂದು ಆರಂಭದಲ್ಲಿಯೇ ವಿತ್ತ ಸಚಿವರು ಘೋಷಿಸಿದ್ದಾರೆ. ರೈತರ ಬೆಳೆಗಳಿಗೆ ಉತ್ತಮ ಬೆಲೆ, ರೈತರ ಆದಾಯ ಹೆಚ್ಚಿಸುವ ಯೋಜನೆಗಳಿಗೆ ಚಾಲನೆ ನೀಡುವುದಾಗಿ ಹೇಳಿದ್ದಾರೆ.ರಾಜ್ಯ ಸರ್ಕಾರಗಳ ಸಹಯೋದೊಂದಿಗೆ ರೈತರ ಕಲ್ಯಾಣ ಯೋಜನೆಗಳು, ಎಪಿಎಂಸಿ ಮಾರುಕಟ್ಟೆಗಳ ಡಿಜಿಟಲೀಕರಣ, ಸಾವಯವ ಕೃಷಿಗೆ