ನವದೆಹಲಿ: 2018-2019ನೇ ಸಾಲಿನ ಬಜೆಟ್ ಮಂಡನೆ ಹಿನ್ನೆಲೆ ಅರುಣ್ ಜೇಟ್ಲಿ ತಮ್ಮ ಭಾಷಣವನ್ನು ಆರಂಭಿಸಿದ್ದಾರೆ. ಇದು 5ನೇ ಬಾರಿ ಅರುಣ್ ಜೆಟ್ಲಿ ಅವರು ತಮ್ಮ ಬಜೆಟ್ ಮಂಡಿಸುತ್ತಿರುವುದು. ಈ ಭಾರಿಯ ಭಾಷಣದಲ್ಲಿನ ಪ್ರಮುಖ ಅಂಶಗಳು ಹೀಗಿವೆ. ಕಳೆದ 4 ವರ್ಷಗಳಿಂದ ಸ್ವಚ್ಛ ಆಡಳಿತ ನೀಡುತ್ತಿದ್ದೇವೆ. ಬಡತನ ನಿರ್ಮೂಲನೆಗೆ ಗಮನ ಹರಿಸಿದ್ದೇವೆ. ಆರ್ಥಿಕ ಸುಧಾರಣೆ ಪ್ರಕ್ರಿಯೆಯನ್ನು ಸಮರ್ಥವಾಗಿ ನಿರ್ವಹಿಸಿದ್ದೇವೆ ಎಂದು ಜೆಟ್ಲಿ ಹೇಳಿದ್ದಾರೆ.