ಸಣ್ಣ ಸಣ್ಣ ವಿಚಾರಕ್ಕೂ ಕೆಲವು ಮುಖ-ಮೂತಿ ಸೊಟ್ಟಗೆ ಮಾಡಿ ಕೋಪ ಮಾಡಿಕೊಳ್ಳುತ್ತಾರೆ. ಇನ್ನೂ ಕೆಲವರಿಗೆ ಒಂದು ಮಾತಾಡಿ ಮತ್ತೊಂದು ಮಾತಾಡುವಷ್ಟರಲ್ಲಿ ಸರ್ರನೆ ಸಿಟ್ಟೇರಿ ಜಗಳವಾಡುತ್ತಾರೆ. ಇಂತಹ ಸಿಟ್ಟಿನಿಂದ ಎಷ್ಟೋ ವರ್ಷಗಳ ಗೆಳೆತನಗಳು ಮುರಿದು ಬಿದ್ದಿವೆ. ಎಷ್ಟೋ ದಾಂಪತ್ಯಗಳು ಛಿದ್ರವಾಗಿವೆ. ಅಷ್ಟೋ ದುರಂತಗಳೇ ಆಗಿಹೋಗಿವೆ. ಅಷ್ಟಕ್ಕೂ ಇಂತಹ ಸಿಟ್ಟು, ಮೂಡ್ ಅಪ್ಸೆಟ್ಗಳಿಗೆ ಕಾರಣವೇನು ಅಂತೀರಾ? ಕೆಲವರು ತುಂಬ ಸೆನ್ಸಿಟಿವ್. ಕೋಪದ ವಿಚಾರದಲ್ಲೂ ಕೂಡಾ. ಇನ್ನೂ ಕೆಲವರಿಗೆ ಕೋಪಾತಾಪಗಳೇನೂ ಇಲ್ಲದಿದ್ದರೂ, ಸಡನ್ನಾಗಿ ಮೂಡ್ ಅಪ್ಸೆಟ್ ಮಾಡಿಕೊಳ್ಳುತ್ತಾರೆ. ಎಲ್ಲರೊಂದಿಗೂ ಸಹವಾಗಿಯೇ ನಗುನಗುತ್ತಾ ಇದ್ದರೂ ಕ್ಷಣ ಮಾತ್ರದಲ್ಲಿ ನಿರಾಸಾದಾಯಕರಂತೆ, ಜಗದ ಭಾರವೆಲ್ಲ