ಮಲ್ಲಿಕಾ ಶೆರಾವತ್ ಹುಟ್ಟಿದ್ದು 1981ರ ಅಕ್ಟೋಬರ್ 24. ತುಲಾ ಲಗ್ನ. ಧನು ರಾಶಿ. ಹುಟ್ಟೂರು ಹರಿಯಾಣ. ತುಲಾ ಲಗ್ನದ ಹುಡುಗಿಯರು ಯಾವಾಗಲು ತೆಳು ಮೈಕಟ್ಟು ಹೊಂದಿರುತ್ತಾರೆ. ಲಗ್ನದಲ್ಲಿ ಶುಕ್ರ, ಶನಿ, ಗುರು ಹಾಗೂ ಸೂರ್ಯರಿದ್ದಾರೆ. ಶುಕ್ರ ಸೌಂದರ್ಯದ ಪ್ರತೀಕವಾದರೆ, ಆ ಸೌಂದರ್ಯವನ್ನು ಶನಿ ಇನ್ನೂ ಪ್ರಕಾಶಿತರನ್ನಾಗಿ ಮಾಡುತ್ತದೆ. ಸಪ್ತಮ ಭಾವ ದಾಂಪತ್ಯವನ್ನು ಸೂಚಿಸುವುದರಿಂದ ಮಲ್ಲಿಕಾ ಕುಂಡಲಿಯ ಪ್ರಕಾರ ಆಕೆಗೆ ದಾಂಪತ್ಯದಲ್ಲಿ ನಷ್ಟವಾಗುವ ಸಂಭವವೇ ಹೆಚ್ಚು. ಕಾಳಸರ್ಪ ಯೋಗ ಇಲ್ಲೂ ಅಡ್ಡಗಾಲು ಹಾಕುತ್ತದೆ. ಗುರು ತೃತೀಯ ಅಥವಾ ಅಷ್ಟಮನಾಗಿ ತುಲಾ ರಾಶಿಯಲ್ಲಿ ಬಾಧಕರಾಗುತ್ತಾರೆ. ಆದರೆ ಶನಿಯ ಗೋಚರೀಯ ಭ್ರಮಣ ಸಿಂಹದಲ್ಲಿರುವುದರಿಂದ ಪ್ರಕಾಂಡ ತೊಂದರೆ ಕಾಣದಿದ್ದರೂ, ಪರಿಶ್ರಮಕ್ಕೆ ಮಾತ್ರ ಫಲ ದಕ್ಕೀತು. | Mallika Sherawat, Bollywood, Sexy Queen, Star Prediction, Astrology, Horoscope