Widgets Magazine

ಹಾಟ್ ಕಾಫಿ 10ರೂ, ಕೋಲ್ಡ್ ಕಾಫಿ 20 ರೂ.

ಇಳಯರಾಜ|
ಸಂತಾ ಬಂತಾ ಇಬ್ಬರೂ ಹೋಟೇಲಿಗೆ ಹೋಗಿ ಕಾಫಿ ಮಾತನಾಡುತ್ತಾ ಕಾಫಿ ಕುಡಿಯುತ್ತಿರುತ್ತಾರೆ. ಏನಾಯಿತೋ ಒಮ್ಮೆಲೆ ಸಂತಾ ಬೇಗನೆ ಕಾಫಿ ಕುಡಿದು ಬಂತಾನಿಗೆ, ಬೇಗ ಬೇಗ ಕಾಫಿ ಕುಡಿಯಪ್ಪಾ, ನಿಧಾನ ಮಾಡಿದ್ರೆ ನಾವು ಜಾಸ್ತಿ ಹಣ ಕೊಡಬೇಕಾದೀತು ಅಂತ ಹೇಳ್ತಾನೆ.

ಬಂತಾನೆ ಸಕತ್ ಕನ್ಫ್ಯೂಸ್. ಅಲ್ಲಾ ಕಣೋ, ನಿಧಾನ ಕಾಫಿ ಕುಡಿದ್ರೆ ಹಣ ಜಾಸ್ತಿ ಕೊಡಬೇಕಂತ ಎಲ್ಲಾದ್ರು ಬರೆದಿದ್ದಾರಾ ಅಂತ ಬಂತ ಕೇಳ್ತಾನೆ.

ಆಗ ಸಂತಾ ಕೋಪದಿಂದ, ಮೂರ್ಖ ಅಲ್ಲಿ ನೋಡೋ, ಹಾಟ್ ಕಾಫಿ 10 ರೂ. ಕೋಲ್ಡ್ ಕಾಫಿ 20 ರೂ. ಅಂತ ಬರೆದದ್ದು ಕಾಣಿಸೋದಿಲ್ಲವಾ ಅಂತ ದಬಾಯಿಸ್ತಾನೆ.


ಇದರಲ್ಲಿ ಇನ್ನಷ್ಟು ಓದಿ :