Widgets Magazine

ಆಫ್ರಿಕಾ ಮತ್ತು ಏಷಿಯಾದಲ್ಲಿ ಕಾಫಿಯ ಕೊಡುಗೆ

ಇಳಯರಾಜ|
ಜಗತ್ತಿನ ಕಾಫಿ ಉತ್ಪಾದನೆಯ ಶೇಕಡಾ 17ರಷ್ಟನ್ನು ಆಫ್ರಿಕಾವು ಉತ್ಪಾದಿಸುತ್ತದೆ. ಇಥಿಯೋಪಿಯಾವು ಸಣ್ಣ ಅರಣ್ಯಗಳಲ್ಲಿ ದೊಡ್ಡ ವ್ಯವಸಾಯದ ಮೂಲಕ ಕೆಲವು ಉತ್ತಮ ಬೀಜಗಳನ್ನು ಉತ್ಪಾದಿಸುತ್ತಿದ್ದು, ಇಥಿಯೋಪಿಯನ್ ಕಾಫಿಯ ಸುವಾಸನೆಯು ಬಹಳ ಅಪರೂಪದ್ದಾಗಿದೆ. ಇದು ಅತಿ ಹೆಚ್ಚು ಹುಳಿಯ ಅಂಶಗಳನ್ನು ಹೊಂದಿಲ್ಲ.

ಇಥಿಯೋಪಿಯನ್ ಕಾಫಿಯಲ್ಲಿ ಸಿಡಾಮೋ ಮತ್ತು ಹಾರರ್ ಪ್ರಸಿದ್ಧವಾದ ಎರಡು ವಿಧಗಳಾಗಿವೆ. ಜಗ್ತತಿನಲ್ಲಿರುವ ಎಲ್ಲಾ ಕಾಫಿಗಳಲ್ಲಿ ಕೀನ್ಯಾ ಕಾಫಿಯು ಉತ್ತಮ ಕಾಫಿಯೆಂದು ಪರಿಗಣಿಸಲಾಗಿದೇದು, ಅದರಲ್ಲೂ, ಕೀನ್ಯಾ ಎಎಯು ಅತ್ಯುತ್ತಮವಾದ ಕಾಪಿ ಎಂದು ಪರಿಗಣಿಸಲಾಗಿದೆ. ತಂಜಾನಿಯಾದಲ್ಲಿರುವ ಮೌಂಟ್ ಕಿಲಿಮಂಜಾರೋ ಇಳಿಜಾರುಗಳು ಸಮೃದ್ಧ ಮಣ್ಣು ಹಾಗೂ ಕಾಲ ಕಾಲದ ಮಳೆಯನ್ನು ಹೊಂದಿದ್ದು, ಅತ್ಯುತ್ತಮ ಅರೇಬಿಕಾ ಕಾಫಿಯನ್ನು ಬೆಳೆಯುತ್ತದೆ.

ಏಷಿಯಾದಲ್ಲಿ, ಭಾರತ, ಇಂಡೋನೇಶಿಯಾ, ಪಿಲಿಪ್ಪಿನ್ಸ್, ವಿಯೆಟ್ನಾಂ ಮತ್ತು ಪಪುವಾ ನ್ಯೂ ಜೀನಾದಲ್ಲಿ ಕಾಫಿಯನ್ನು ಬೆಳೆಯುತ್ತಿದ್ದು, ಇಲ್ಲರುವ ಸಿಗಿರಿ ಎಂಬ ಪ್ರಸಿದ್ಧ ವಿಧದ ಕಾಫಿಯು ಸಣ್ಣ ಪ್ರಮಾಣದ ಬೆಳೆಗಾರರು ಕೂಡ ತಮ್ಮ ಉದ್ಯಮದಲ್ಲಿ ಅಭಿವೃದ್ಧ ಹೊಂದುವಂತೆ ಮಾಡುತ್ತದೆ.

ವಿಶ್ವದಲ್ಲಿ ಇಂಡೋನೇಶಿಯಾವು ನಾಲ್ಕು ಅಥವಾ ಐದನೇ ಅತಿ ದೊಡ್ಡ ಕಾಫಿ ಉತ್ಪಾದನಾ ದೇಶವಾಗಿದೆ.ಇಂಡೋನೇಶಿಯಾ ಕಾಫಿಯಲ್ಲಿ ಹುಳಿಯ ಪ್ರಮಾಣವು ಅತ್ಯಂತ ಕಡಿಮೆಯಾಗಿದೆ. ಜಾವಾ, ಸುಮಾತ್ರಾ, ಗಾಯೋ ಮೌಂಟೈನ್ ಮಾಂಡೊಲಿಂಗ್ ಮುಂತಾದವುಗಳು ಕಾಫಿ ಇತಿಹಾಸದಲ್ಲಿರುವ ವಿನೂತನ ಹೆಸರುಗಳಾಗಿವೆ.

ಪ್ರಸಕ್ತ ವಿಶ್ವದಲ್ಲಿ ರೋಬಸ್ಟಾ ಕಾಫಿಯನ್ನು ಉತ್ಪಾದನೆ ಮಾಡುವ ಎರಡನೇ ಅತಿ ದೊಡ್ಡ ರಾಷ್ಟ್ರವಾಗಿದೆ. ಮಟಾರಿ ಬಾನಿ ಮಟಾರ್ ಎಂಬುದು ಯೆಮೆನ್ ನ ನೈಜ ಮೋಖಾ ವಿಧವಾಗಿದೆ.


ಇದರಲ್ಲಿ ಇನ್ನಷ್ಟು ಓದಿ :