ಬೆಳಗ್ಗೆ ಏಳುವ ಮೊದಲೇ ಕುಡಿಯುವ ಕಾಫಿಗೆ ಬೆಡ್ ಕಾಫಿ ಎಂಬ ಆಪ್ಯಾಯಮಾನ ಹೆಸರಿನೊಂದಿಗೆ, ಕಾಫಿ ಎಂಬುದು ಜನ ಜೀವನದಲ್ಲಿ ಹಾಸುಹೊಕ್ಕಾಗಿದೆ ಎಂಬುದು ವೇದ್ಯವಾಗುತ್ತದೆ. ಬೆಳಗ್ಗೆ ಅಥವಾ ಸಂಜೆಯ ಉಪಾಹಾರ ಸೇವನೆಗೆ ಹೋಗಬೇಕಿದ್ದರೆ, ಕಾಫಿಗೆ ಹೋಗೋಣ ಅಂತಲೇ ಹೇಳುವ ಪರಿಪಾಠವೂ ಇದೆ.