Widgets Magazine

ಕಾಫಿ ಬೀಜಗಳ ವೈವಿದ್ಯತೆಗಳು

ಇಳಯರಾಜ|
ಕಾಫಿ ಗಿಡಗಳಲ್ಲಿ ಎರಡು ವಿಧದ ಗಿಡಗಳಿದ್ದು, ಮೊದಲನೆಯದ್ದು ‘ಅರಬಿಕ’ ಇದು ಎತ್ತರ ಪ್ರದೇಶಗಳಲ್ಲಿ ಚೆನ್ನಾಗಿ ಬೆಳೆಯುತ್ತದೆ. ಎರಡನೆಯದು ‘ರೋಬಸ್ಟಾ’ ಇವು ತಗ್ಗು ಪ್ರದೇಶಗಳಲ್ಲಿ ಉತ್ತಮವಾಗಿ ಬೆಳೆಯುತ್ತವೆ. ‘ಅರೆಬಿಕ’ ಬೀಜಗಳಲ್ಲಿ ಕೆಫಿನ್ ಅಂಶವು ಕಡಿಮೆಯಾಗಿದ್ದು, ಸಪ್ಪೆಯಾದಂತಿದ್ದರೆ, ‘ರೋಬಸ್ಟಾ’ ಬೀಜಗಳು ಹೆಚ್ಚು ಶಕ್ತಿಯನ್ನು ಹೊಂದಿದೆ . ಅರೆಬಿಕ ಬೀಜವು ಅತ್ಯಂತ ಸುವಾಸನೆಯನ್ನು ಹೊಂದಿರುವುದರಿಂದ, ರೋಬಸ್ಟಾ ಬೀಜಗಳನ್ನು ಹೋಲಿಸಿದರೆ, ಇದಕ್ಕೆ ಮಾರುಕಟ್ಟೆ ಬೆಲೆಯು ಹೆಚ್ಚಾಗಿದೆ.

ಅರೆಬಿಕಾಗೆ ಅತಿ ಹೆಚ್ಚು ಪೋಷಣೆ ಮತ್ತು ಆರೈಕೆಯ ಅಗತ್ಯವಿದ್ದು, ದೊಡ್ಡ ಪ್ರಮಾಣದ ಬೆಳೆಗಾರರಿಗೆ ಇದು ತುಂಬಾ ಉಪಯುಕ್ತವಾಗಿದೆ. ಅರಬಿಕವನ್ನು ಬೆಳೆಯಲುನ ಭಾರತದಲ್ಲಿ ಡಿಸೆಂಬರ್ ಮಾಸವು ಸೂಕ್ತ ಕಾಲವಾಗಿದೆ.

ರೋಬಸ್ಟಾ ಗಿಡವು ಪೊದೆಗಳಿಂದ ಕೂಡಿದ್ದು, ಇದರ ಬೀಜಗಳು ದೊಡ್ಡದಾಗಿ ಗೊಂಚಲುಗಳಿದ ಕೂಡಿರುತ್ತವೆ. ಇದರ ಮೂಲ ಹೆಸರು ಕೇನ್‌ಪೋರಾ ಎಂದಾಗಿದ್ದು, ಇದರ ಗಟ್ಟಿಮುಟ್ಟಾದ ಲಕ್ಷಣಗಳಿಂದಾಗಿ ಇದನ್ನು ರೋಬಸ್ಟಾ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇದು ತಗ್ಗು ಪ್ರದೇಶದಲ್ಲಿ ಬೆಳೆಯುವ ಗಿಡವಾಗಿದ್ದು, ದೊಡ್ಡ ಮತ್ತು ಸಣ್ಣ ಎರಡೂ ಬೆಳೆಗಾರರಿಗೂ ಇದು ಉಪಯುಕ್ತವಾಗಿದೆ.ಭಾರತದಲ್ಲಿ ರೋಬಸ್ಟಾವನ್ನು ಬೆಳೆಯಲು ಜನವರಿ ಮತ್ತು ಫೆಬ್ರವರಿ ಮಾಸವು ಸೂಕ್ತ ಕಾಲವಾಗಿದೆ.


ಇದರಲ್ಲಿ ಇನ್ನಷ್ಟು ಓದಿ :