Widgets Magazine

ಬಾಬಾ ಬುಡನ್ ಗಿರಿ ಅತ್ಯುತ್ತಮ ಕಾಫಿ ವಲಯ

ಇಳಯರಾಜ|
ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯು ಭಾರತದಲ್ಲಿರುವ ಅತ್ಯುತ್ತಮ ಕಾಫಿ ವಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಅತ್ಯುತ್ತಮ ಅರೇಬಿಕಾ ಕಾಫಿಯನ್ನು ಉತ್ಪಾದಿಸುವ ಇಲ್ಲರಿವ ಬಾಬಾಬುಡನ್ ಬೆಟ್ಟವು, ಸೂಕ್ಷ್ಮ ವಾತಾವರಣ ಮತ್ತು ಎತ್ತರ ಪ್ರದೇಶ ಎರಡರ ಸಂಯೋಜನೆಯನ್ನು ನೀಡುತ್ತದೆ.ಕಾಫಿ ನಿಸರ್ಗಕ್ಕೆ ಈ ಬೆಟ್ಟವು ಪ್ರಥಮ ನೆಲೆಯನ್ನು ನೀಡಿದ ಪರಿಣಾಮವಾಗಿ ಈ ಬೆಟ್ಟವೂ ಒಟ್ಟಾಗಿ ಆಕಸ್ಮಿಕವಾಗಿದೆ.

ಐತಿಹಾಸಿಕ ದಾಖಲೆಗಳ ಪ್ರಕಾರ, 17ನೇ ಶತಮಾನದಲ್ಲಿ ಬಹೌದ್ ದಿನ್ ಅಥವಾ ಬಾಬಾ ಬುಡನ್ ಎಂದೇ ಪ್ರಖ್ಯಾತರಾಗಿದ್ದ ಸುಫಿ ಸಂತ ಹಜ್ರತ್ ಶಾ ಜನಾಬ್ ಅಲ್ಲಾಹ್ ಮಹಗತಾಬಿ, ಈ ಬೆಟ್ಟದಲ್ಲಿರುವ ಕೆಲವು ಗುಹೆಗಳಲ್ಲಿ ವಾಸವಾಗಿದ್ದರು.
ಸುಮಾರು ಕ್ರಿ.ಶ 1670ರಲ್ಲಿ ಮೆಕ್ಕಾ ಯಾತ್ರೆಗೆ ತೆರಳಿದ್ದು, ನಿಸ್ಸಂದೇಹವಾಗಿಯೂ ಕಾಫಿಯ ಉತ್ಕೃಷ್ಟತೆಯನ್ನು ಕಂಡುಹಿಡಿದು, ಅದು 15ನೇ ಶತಮಾನದ ಕೊನೆಯಲ್ಲಿ ಪವಿತ್ರ ನಗರಕ್ಕೆ ತಲುಪಿತ್ತು. ಕಾಫಿ ಸೇವನೆಯ ಮಸೀದಿಯಲ್ಲಿನ ಸೂಫಿ ಪಂಗಡಗಳಲ್ಲಿ ಮೊದಲಿನಿಂದಲೂ ಇದ್ದ ಸಂಪ್ರದಾಯವಾಗಿತ್ತು. ಮೆಕ್ಕಾ ಬಲಿಷ್ಟ ಸಂಸ್ಕೃತಿಯ ಪ್ರಭಾವದಿಂದಾಗಿ ಕಾಫಿಯು ಕ್ರಮೇಣ ಇಡೀ ಅರಬ್ ಜಗತ್ತಿನಲ್ಲೇ ಪ್ರತ್ಯಕ್ಷ ವಿಷಯವಾಯಿತು.

ಎಲ್ಲಾ ಅರಬ್ ಜಗತ್ತಿಗೆ ಕಾಫಿಯನ್ನು ರಫ್ತು ಮಾಡುತ್ತಿದ್ದ ಹಸಿರು ಕಾಫಿಯ ಮೇಲೆ ಮೋಖಾ ಮತ್ತು ಯಾಮೆನ್ ಬಂದರುಗಳು ಏಕಸ್ವಾಮ್ಯ ಪಡೆದಿದ್ದರಿಂದ, ಏಳು ಕಾಫಿ ಗಿಡಗಳನ್ನು ಹೊರತರಲು ಬಾಬಬುಡನ್ ಹೇಗೆ ನಿರ್ವಹಿಸಿದ ಎಂಬುದು ಅತ್ಯಂತ ಆಶ್ಚರ್ಯಕರವಾದ ಸಂಗತಿಯಾಗಿತ್ತು.

ಬಾಬಾಬುಡನ್ ಚಂದ್ರಗಿರಿ ಬೆಟ್ಟದಲ್ಲಿರುವ ತನ್ನ ನಿವಾಸಕ್ಕೆ ಹಿಂತಿರುಗಿದ ನಂತರ, ಬೆಟ್ಟಗಳ ಬದಿಯಲ್ಲಿ ಕಾಫಿ ಬೀಜಗಳನ್ನು ನೆಟ್ಟು ಅಭಿವೃದ್ದಿಪಡಿಸಿದನು. ಸಹಜ ಕಾಫಿ ವಿಧವಾದ ಚಿಕ್, ವಿಶಿಷ್ಟ ಮೋಕಾ ಸುವಾಸನೆಯನ್ನು ಹೊಂದಿದ್ದು, ಕಾಫಿ ಇತಿಹಾಸದ ಈ ಎಪಿಸೋಡಿಗೆ ವಿಶ್ವಾಸ ನೀಡಿದೆ.

ಈ ಪ್ರಸಿದ್ಧವಾದ ಸಂತನಿಗೆ ಕಾಣಿಕೆಯ ರೂಪದಲ್ಲಿ ಮುಂದೆ ಚಂದ್ರಗಿರಿ ಬೆಟ್ಟವು ಬಾಬಾಬುಡನ್ ಗಿರಿ ಎಂಬುದಾಗಿ ಪುನರಾಂಕಿತಗೊಂಡಿತು.
ಇದರಲ್ಲಿ ಇನ್ನಷ್ಟು ಓದಿ :