Widgets Magazine

ಭಾರತದಲ್ಲಿ ಕಾಫಿಯ ಸಾವಯವಗಳು

ಇಳಯರಾಜ|
ಲೋಹಾಸ್‌ನ ಆರೋಗ್ಯದ ಜೀವನಶೈಲಿಯು ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಚೋದನೆಯನ್ನು ಪಡೆಯುತ್ತಿದ್ದು, ಆಹಾರ ಸುರಕ್ಷತೆಗೆ ತೊಡಕನ್ನು ಉಂಟುಮಾಡುವ ವಿಷಯುಕ್ತ ಪದಾರ್ಥ, ಕೀಟನಾಶಕ ಹಾಗೂ ಮಾಲಿನ್ಯರಹಿತ ಉತ್ಪಾದನೆಯನ್ನು ಎದುರು ನೋಡುತ್ತಿರುವ ಜಾಗತಿಕ ಬಳಕೆದಾರರಿಗೆ ನೆರವು ನೀಡಲು ಕಾಫಿ ಉತ್ಪಾದನಗಾರರು ಸಿದ್ಧರಾಗಿದ್ದಾರೆ.

ಸಾವಯವ ಕಾಫಿಯನ್ನು ಒಂದು ವಿಶೇಷ ಬಗೆಯ ಕಾಫಿಯನ್ನಾಗಿ ಪರಿಗಣಿಸಲಾಗಿದ್ದು, ದೃಢೀಕೃತ ಸಾವಯವ ವ್ಯವಸಾಯ ಹಾಗೂ ಸಂಸ್ಕರಣ ಪದ್ಧತಿಯ ಮೂಲಕ ಉತ್ಪಾದಿಸಲಾಗುತ್ತದೆ. ನೈಸರ್ಗಿಕ ಉತ್ಪನ್ನಗಳನ್ನು ಹೂಡುವಳಿಯಾಗಿ ಉಪಯೋಗಲಾಗಿದ್ದು, ಸಂಸ್ಕರಣ ಮತ್ತು ಉತ್ಪಾದನೆಯ ಎಲ್ಲಾ ಹಂತಗಳಲ್ಲಿಯೂ ವಿಶೇಷ ಕಾಳಜಿಯನ್ನು ತೆಗೆದುಕೊಳ್ಳಲಾಗುತ್ತದೆ.

ಜೊತೆಗೆ, ಯೂವುದೇ ಕೀಟನಾಶಗಳನ್ನು ಉಪಯೋಗಿಸುವುದಿಲ್ಲ ಮತ್ತು ಇದು ಮಾಲಿನ್ಯರಹಿತವಾಗಿರುವುದರಿಂದ ಆರೋಗ್ಯ ಪ್ರಜ್ಞೆಯ ಕಾಫಿ ತಜ್ಞರಿಂದ ಇದು ಆಯ್ದುಕೊಳ್ಳಲ್ಪಟ್ಟಿದೆ.ಭಾರತದಲ್ಲಿ ಕಾಫಿಯನ್ನು ಮೇಲ್ಛಾವಣಿ ಮಿಶ್ರಿತ ನೆರಳಿನ ಅಡಿಯಲ್ಲಿ ಬೆಳೆಸುವುದರಿಂದ ಭಾರತದಲ್ಲಿ ಸಾವಯವ ಕಾಫಿಯ ಸ್ಥಿತಿಯು ಉತ್ತಮವಾಗಿದೆ.

ಅಲ್ಲದೆ, ದೇಶದ ಶೇಕಡಾ 42ರಷ್ಟು ಕಾಫಿ ಪ್ರದೇಶಗಳನ್ನು ವ್ಯಾಪಿಸಿದ ಹೆಚ್ಚಿನ ಸಣ್ಣ ಮತ್ತು ಬುಡಗಟ್ಟು ಕಾಫಿ ನಿರ್ವಾಹಕರು ಸಾಂಪ್ರಾದಾಯಿಕವಾಗಿ ನಿರ್ವಹಿಸುತ್ತಿದ್ದು, ಇದು ಸಾವಯವ ಮತ್ತು ನೈಸರ್ಗಿಕ ವ್ಯವಸಾಯಕ್ಕೆ ತುಂಬಾ ಉಪಯುಕ್ತವಾಗಿದೆ.
ಸಾವಯವ ವ್ಯವಸಾಯವನ್ನು ಬಲಪಡಿಸುವ ನಿಟ್ಟಿನಲ್ಲಿ ಕೇರಳದ ಇಡುಕ್ಕಿ, ಆಂಧ್ರಪ್ರದೇಶದ ಪೂರ್ವಘಟ್ಟಗಳನ್ನು ಮತ್ತು ಈಶಾನ್ಯ ರಾಜ್ಯ ಪ್ರದೇಶಗಳನ್ನು ಅಭಿವೃದ್ಧಿಗೊಳಿಸಲಾಗಿದೆ.


ಇದರಲ್ಲಿ ಇನ್ನಷ್ಟು ಓದಿ :