ಬೆಂಗಳೂರು: ಯಾಕೋ ಈ ವರ್ಷದ ಆರಂಭವೇ ಚೆನ್ನಾಗಿಲ್ಲವೆನಿಸುತ್ತದೆ. ಇತ್ತೀಚೆಗಷ್ಟೇ ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ನನಗೆ ಅವಕಾಶ ಸಿಕ್ಕರೆ 2020 ನ್ನು ಡಿಲೀಟ್ ಮಾಡಿ ಹೊಸದಾಗಿ ಮಾಡುವೆ ಎಂದಿದ್ದರು.ನಿನ್ನೆ ವಿಶಾಖಪಟ್ಟಣದಲ್ಲಿ ನಡೆದ ದುರಂತ ನೋಡಿದರೆ ಅವರ ಮಾತು ಮತ್ತೆ ನೆನಪಾಗುತ್ತಿದೆ. ಈ ವರ್ಷ ಆರಂಭದಿಂದಲೇ ವಿಶ್ವವೇ ಹಿಂದೆಂದೂ ಕಾಣದ ಮಹಾಮಾರಿ ಕೊರೋನಾಗೆ ಸಿಕ್ಕು ನರಳುತ್ತಿದೆ. ಈಗಾಗಲೇ ಜನರ ಜೀವ, ಜೀವನ ಎಲ್ಲವೂ ಅಪಾಯದಲ್ಲಿದ್ದು, ದೈನಂದಿನ ಚಟುವಟಿಕೆಗಳೂ ಸ್ತಬ್ಧವಾಗಿದೆ.ಈ ಆಘಾತದಿಂದ