ಬೆಂಗಳೂರು: ಕೊರೋನಾವೈರಸ್ ಬಗ್ಗೆ ಜನರಲ್ಲಿ ಅನೇಕ ಆತಂಕಗಳಿವೆ. ಮಾಮೂಲು ಜ್ವರ ಬಂದರೂ ನನಗೆ ಕೊರೋನಾ ತಗುಲಿದೆಯೇನೋ ಎಂದು ಆತಂಕಪಡುವಂತಾಗಿದೆ. ಜನರ ಈ ಆತಂಕಗಳಿಗೆ ಉತ್ತರಿಸಲು ರಾಜ್ಯ ಸರ್ಕಾರ ಆಪ್ತಮಿತ್ರನ ಲಾಂಚ್ ಮಾಡಿದೆ.ಕೊರೋನಾ ಸೋಂಕಿನ ಲಕ್ಷಣಗಳಿದ್ದರೆ ಕರೆ ಮಾಡಿ ಹೆಚ್ಚಿನ ಮಾಹಿತಿ ಪಡೆಯಲು ಅನುಕೂಲವಾಗುವಂತೆ ರಾಜ್ಯ ಸರ್ಕಾರ ಆಪ್ತಮಿತ್ರ ಸಹಾಯವಾಣಿ ಆರಂಭಿಸಿದೆ.14410 ಎಂಬ ಸಂಖ್ಯೆಗೆ ಕರೆ ಮಾಡಿ ನಿಮ್ಮ ಅನುಮಾನಗಳನ್ನು ಪರಿಹರಿಸಿಕೊಳ್ಳಬಹುದು. ಈ ಸಹಾಯವಾಣಿ ಬೆಳಿಗ್ಗೆ 8 ರಿಂದ ರಾತ್ರಿ 8