ಬೆಂಗಳೂರು: ಕೊರೋನಾ ಬಾರದಂತೆ ತಡೆಯಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯ. ಆದರೆ ಕೊರೋನಾದಿಂದ ಗುಣಮುಖರಾದವರಿಗೆ, ಕೊರೋನಾ ವಾರಿಯರ್ಸ್ ಗೆ ಈಗ ಇದೇ ಕುತ್ತು ತಂದಿದೆ.ಕೊರೋನಾದಿಂದ ಗುಣಮುಖರಾದರೂ ಯಾರೂ ಹತ್ತಿರಕ್ಕೆ ಸೇರಿಸಿಕೊಳ್ಳುತ್ತಿಲ್ಲ. ಕೊರೋನಾ ವಾರಿಯರ್ಸ್ ಬಳಿ ಜನರು ಬರಲು ಹೆದರುತ್ತಿದ್ದಾರೆ ಎಂಬಿತ್ಯಾದಿ ದೂರುಗಳ ಹಿನ್ನಲೆಯಲ್ಲಿ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ ರಾವ್ ಬೀದಿ ನಾಟಕ, ಹಾಡು, ಗುಂಪು ಚಟುವಟಿಕೆ ಮೂಲಕ ಜಾಗೃತಿ ಮೂಡಿಸಲು ಕರೆ ನೀಡಿದ್ದಾರೆ. ಅಷ್ಟೇ ಅಲ್ಲ, ಆಸಕ್ತರು ಇದರಲ್ಲಿ