ವಿಶ್ವ ದಾದಿಯರ ದಿನಕ್ಕೆ ಶುಭ ಹಾರೈಸಿದ ನಟ ಅನಿರುದ್ಧ

ಬೆಂಗಳೂರು| Krishnaveni K| Last Updated: ಮಂಗಳವಾರ, 12 ಮೇ 2020 (10:52 IST)
ಬೆಂಗಳೂರು: ಇಂದು ವಿಶ್ವ ದಾದಿಯರ ದಿನವಾಗಿದ್ದು, ಸ್ಯಾಂಡಲ್ ವುಡ್ ನಟ ಅನಿರುದ್ಧ್ ವಿಶೇಷವಾಗಿ ವಿಡಿಯೋ ಸಂದೇಶದ ಮೂಲಕ ಶುಭ ಹಾರೈಸಿದ್ದಾರೆ.

 
ಕೊರೋನಾ ವಿರುದ್ಧ ಜಗತ್ತಿನಾದ್ಯಂತ ನರ್ಸ್ ಗಳು ತಮ್ಮ ಪ್ರಾಣದ ಹಂಗು ತೊರೆದು ಶುಶ್ರೂಷೆ ಮಾಡುತ್ತಿರುವಾಗ ಇಂದಿನ ದಾದಿಯರ ದಿನಕ್ಕೆ ವಿಶೇಷ ಅರ್ಥ ಸಿಕ್ಕಿದೆ.
 
ಹೀಗಾಗಿ ನಮ್ಮನ್ನು ಸ್ವಂತ ಸಹೋದರಿಯರಂತೆ ಶುಶ್ರೂಷೆ ಮಾಡುವ ಎಲ್ಲಾ ನರ್ಸ್ ಗಳಿಗೂ ಅಂತರಾಷ್ಟ್ರೀಯ ದಾದಿಯರ ದಿನದ ಶುಭಾಷಯಗಳು ಎಂದು ನಟ ಅನಿರುದ್ಧ್ ಶುಭ ಹಾರೈಸಿದ್ದಾರೆ. ಅನಿರುದ್ಧ್ ಅಲ್ಲದೆ ಅನೇಕ ಸೆಲೆಬ್ರಿಟಿಗಳೂ ಸಾಮಾಜಿಕ ಜಾಲತಾಣಗಳ ಮೂಲಕ ನರ್ಸ್ ಗಳಿಗೆ ಶುಭ ಕೋರಿ ಸಂದೇಶ ಬರೆದುಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :