ಬೆಂಗಳೂರು: ಕೊರೋನಾ ಸೋಂಕಿನಿಂದ ಬಳಲುತ್ತಿರುವ ನಟಿ ಅನುಪ್ರಭಾಕರ್ ಈಗ ಕೊರೋನಾ ಬಂದಾಗ ಯಾವ ರೀತಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಮೂರು ವಿಡಿಯೋ ಪ್ರಕಟಿಸುವ ಮೂಲಕ ಸಲಹೆ ನೀಡಿದ್ದಾರೆ. ನನಗೆ ಕೊರೋನಾ ಲಕ್ಷಣ ಹೆಚ್ಚೇನೂ ಇರಲಿಲ್ಲ. ಕೇವಲ ಬಾಯಿ ರುಚಿ, ವಾಸನೆ ಹೋಗಿತ್ತು ಅಷ್ಟೇ. ಈ ಸಂದರ್ಭದಲ್ಲೇ ವೈದ್ಯೆಯಾಗಿರುವ ತನ್ನ ಅಕ್ಕನ ಸಲಹೆ ಮೇರೆಗೆ ಐಸೋಲೇಟ್ ಆದೆ. ಇದರಿಂದಾಗಿ ನನ್ನ ಮನೆಯ ಇತರ ಸದಸ್ಯರಿಗೆ ಯಾರಿಗೂ ಕೊರೋನಾ ಬರಲಿಲ್ಲ.