ಕೊರೋನಾಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ: ಬಿ ಶ್ರೀರಾಮುಲು ಫುಲ್ ಹೊಗಳಿಕೆ

ಬೆಂಗಳೂರು| Krishnaveni K| Last Modified ಸೋಮವಾರ, 10 ಆಗಸ್ಟ್ 2020 (10:12 IST)
ಬೆಂಗಳೂರು: ಕೊರೋನಾ ಸೋಂಕಿಗೊಳಗಾಗಿರುವ ಸಚಿವ ಬಿ ಶ್ರೀರಾಮುಲು ಸರ್ಕಾರಿ ಆಸ್ಪತ್ರೆಗೆ ದಾಖಲಾಗುವ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

 
ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಪರೀಕ್ಷೆಗೊಳಗಾದ ಸಚಿವರಿಗೆ ಕೊರೋನಾ ಇರುವುದು ನಿನ್ನೆ ದೃಢಪಟ್ಟಿತ್ತು. ಇದೀಗ ಅವರು ಚಿಕಿತ್ಸೆಗಾಗಿ ಶಿವಾಜಿನಗರದ ಸರ್ಕಾರಿ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
 
ಜನಪ್ರತಿನಿಧಿ, ಮಂತ್ರಿ ಎಂಬ ಹಮ್ಮಿಲ್ಲದೇ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಕ್ಕೆ ಸಾಮಾಜಿಕ ಜಾಲತಾಣಗಳ ಮೂಲಕ ನೆಟ್ಟಿಗರು ಅವರನ್ನು ಅಭಿನಂದಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :