ಬೆಂಗಳೂರು: ಸದಾ ಮನೆಯಿಂದ ಹೊರಹೋಗಿ ಆಟವಾಡಿಕೊಂಡಿರಲು ಬಯಸುವ ಮಕ್ಕಳಿಗೆ ಲಾಕ್ ಡೌನ್ ಜೈಲಿನಂತಾಗಿದೆ. ಹೊರಗೆ ಹೋಗುವಂತಿಲ್ಲ, ಪಕ್ಕದ ಮನೆಯ ಮಕ್ಕಳೊಂದಿಗೆ ಆಡುವಂತಿಲ್ಲ. ಮನೆಯೊಳಗೇ ಬಂಧಿಯಾಗಿ ಮಕ್ಕಳೂ ಒಂದು ರೀತಿ ಖಿನ್ನರಾಗುತ್ತಿದ್ದಾರೆ.ಹೀಗಾಗಿ ಮಕ್ಕಳನ್ನು ನೋಡಿಕೊಳ್ಳುವ ವಿಚಾರದಲ್ಲಿ ಪೋಷಕರು ಈಗ ಅತೀ ಎಚ್ಚರವಹಿಸಬೇಕಾಗಿದೆ. ಆದಷ್ಟು ಅವರ ಜತೆ ಕಾಲ ಕಳೆಯಲು ನೋಡಿ. ಅವರ ಜತೆ ಮಗುವಾಗಿ ಆಡಿ, ಕ್ರಾಫ್ಟ್ ಮಾಡಿ.ಆದರೆ ಯಾವುದೇ ಕಾರಣಕ್ಕೂ ಓದು, ಬರಿ ಎಂದು ಒತ್ತಡ ಹೇರುವುದು, ಸಿಡುಕುವುದು ಮಾಡುತ್ತಿರಬೇಡಿ.