ಬೆಂಗಳೂರು: ಕೊರೋನಾವೈರಸ್ ಗೆ ಹೆದರಿ ಮನೆಯಲ್ಲೇ ಕೂರುವ ಕಾಲ ಕಳೆದು ಈಗ ಕೊರೋನಾ ಜೊತೆಗೇ ಬದುಕಲು ಕಲಿಯುವ ಸಮಯ ಬಂದಿದೆ. ಇನ್ನೇನು ಜನ ಜೀವನ ಸಹಜಸ್ಥಿತಿಗೆ ಬರುತ್ತಿದ್ದು, ಕಚೇರಿಗಳೂ ತೆರೆಯುತ್ತಿವೆ. ಆದರೆ ಕೊರೋನಾ ನಿಂತಿಲ್ಲ ಎನ್ನುವುದನ್ನು ಮರೆಯಬಾರದು. ಹಾಗಾಗಿ ಕಚೇರಿಗೆ ತೆರಳಿದರೆ ಮನೆಗೆ ಬಂದ ಮೇಲೆ ವೈಯಕ್ತಿಕ ಸುರಕ್ಷತೆ ಬಗ್ಗೆ ಎಚ್ಚರಿಕೆ ವಹಿಸುವುದು ಮುಖ್ಯ.ಮನೆಗೆ ಬಂದ ತಕ್ಷಣವೇ ಎಂದಿನಂತೆ ಎಲ್ಲೆಂದರಲ್ಲಿ ಕೂರದೇ, ಡ್ರೆಸ್ ಹಾಕದೇ ನೇರವಾಗಿ ಬಚ್ಚಲು ಮನೆಗೆ ಹೋಗಿ.