ಮುಂಬೈ: ಬ್ರಿಟನ್ ನಿಂದ ಮರಳಿದ ಬಳಿಕ ಪಾರ್ಟಿ ಆಯೋಜಿಸಿ ಹಲವರಿಗೆ ಕೊರೋನಾವೈರಸ್ ಹರಡಿದ ಆರೋಪದಲ್ಲಿ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ವಿರುದ್ಧ ಎಫ್ ಐಆರ್ ದಾಖಲಾಗಿದೆ.ಏರ್ ಪೋರ್ಟ್ ನಲ್ಲಿ ಸ್ಕ್ರೀನಿಂಗ್ ಗೊಳಗಾಗದೇ ಬಂದಿದ್ದ ಕನಿಕಾ ಮುಂಬೈನಲ್ಲಿ ವಿಐಪಿಗಳಿಗಾಗಿ ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯಲ್ಲಿ ಬಿಜೆಪಿ ಸಂಸದ ದುಶ್ಯಂತ್ ಸಿಂಗ್ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಂಡಿದ್ದರು. ಕನಿಕಾಗೆ ಕೊರೋನಾ ಇದ್ದು, ಪಾರ್ಟಿಗೆ ಹಾಜರಾಗಿದ್ದವರಿಗೆಲ್ಲಾ ಸೋಂಕು ತಗುಲಿರುವ ಶಂಕೆಯಿದೆ.ಕನಿಕಾ ವಿರುದ್ಧ ಭಾರೀ ಟೀಕೆ