ರಾಜ್ಯದಲ್ಲಿ ಕೊರೊನಾ ಸ್ಫೋಟ; ಸಾವಿನ ಸಂಖ್ಯೆ 1,147ಕ್ಕೇರಿಕೆ

ಬೆಂಗಳೂರು| pavithra| Last Updated: ಶನಿವಾರ, 18 ಜುಲೈ 2020 (11:19 IST)

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸ್ಫೋಟವಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 50 ಸಾವಿರ ಗಡಿದಾಟಿದೆ.

 

ನಿನ್ನೆ ಒಂದೇ ದಿನ 3,693 ಕೊರೊನಾ ಕೇಸ್ ದಾಖಲಾಗಿದೆ. ಆ ಮೂಲಕ ಸೋಂಕಿತರ ಸಂಖ್ಯೆ 55,115ಕ್ಕೇರಿಕೆಯಾಗಿದೆ. ಹಾಗೇ ನಿನ್ನೆ ಒಂದೇ ದಿನದಲ್ಲಿ 115 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ. ಅದರಂತೆ ರಾಜ್ಯದಲ್ಲಿ ಸಾವಿನ ಸಂಖ್ಯೆ 1,147ಕ್ಕೇರಿಕೆ ಆಗಿದೆ. ಈಗ ರಾಜ್ಯದಲ್ಲಿ 33,205 ಪ್ರಕರಣ ಸಕ್ರಿಯವಾಗಿದೆ.

ಅಲ್ಲದೇ ರಾಜ್ಯ ರಾಜಧಾನಿ ಬೆಂಗಳೂರಲ್ಲಿ ನಿನ್ನೆ ಒಂದೇ ದಿನ 2,208 ಕೇಸ್ ದಾಖಲಾಗಿದೆ. ಅದರಂತೆ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 27,496 ಆಗಿದೆ. ಬೆಂಗಳೂರಿನಲ್ಲಿ ಒಂದೆ ದಿನ 75 ಮಂದಿ ಸಾವನಪ್ಪಿದ್ದಾರೆ. ಆ ಮೂಲಕ ಬೆಂಗಳೂರಿನಲ್ಲಿ ಮೃತರ ಸಂಖ್ಯೆ 582ಕ್ಕೇರಿಕೆಯಾಗಿದೆ.

 
ಇದರಲ್ಲಿ ಇನ್ನಷ್ಟು ಓದಿ :