ಬೆಂಗಳೂರು: ಕೊರೋನಾ ಎಂದರೇ ಭಯಬೀಳುವ ಮಂದಿಗೆ ಕೊರೋನಾ ಪೀಡಿತರಾಗಿ ಈಗ ಗುಣಮುಖರಾದ ಸೆಲೆಬ್ರಿಟಿಗಳು ಸ್ಪೂರ್ತಿಯಾಗಲಿದ್ದಾರೆ. ಸುಮಲತಾ ಅಂಬರೀಶ್, ನವ್ಯಾ ಸ್ವಾಮಿ, ಧ್ರುವ ಸರ್ಜಾ ಕೊರೋನಾದಿಂದ ಗುಣಮುಖರಾದ ಬಳಿಕ ಹೇಳಿದ ಮಾತುಗಳು ನಿಮ್ಮ ಧೈರ್ಯ ಹೆಚ್ಚಿಸಬಹುದು. ಸುಮಲತಾ ಅಂಬರೀಶ್: ಅಂಬರೀಶ್ ನನಗೆ ಯಾವತ್ತೂ ಹೇಳೋರು, ಏನೇ ಕಷ್ಟ ಬಂದರೂ ಅದನ್ನು ಧೈರ್ಯದಿಂದ ಎದುರಿಸಬೇಕೆಂದು. ನಾನು ಎದುರಿಸಿದ್ದ ಬೇರೆ ಕಷ್ಟಗಳ ಮುಂದೆ ಕೊರೋನಾ ನನಗೆ ಕಷ್ಟವೆನಿಸಿರಲಿಲ್ಲ. ಕೊರೋನಾಗೆ ಯಾರೂ ಭಯಪಡಬೇಕಿಲ್ಲ. ಇದು ಗುಣಪಡಿಸಲಾಗದ