ಬೆಂಗಳೂರು: ಕೊರೋನಾ ಎಂದರೆ ಸಾಕು ಜನ ಈಗ ವಿಚಿತ್ರ ಜೀವಿಯಂತೆ ನಡೆಸಿಕೊಳ್ಳುವುದು ಸಾಮಾನ್ಯವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಇದು ಅನಿವಾರ್ಯ ಕೂಡಾ. ಆದರೆ ಕೊರೋನಾ ರೋಗಿಗಳನ್ನು ಕೊಂಡೊಯ್ಯುವಾಗ ಮಾಧ್ಯಮಗಳಿಂದ ಹಿಡಿದು, ಸ್ಥಳೀಯರೂ ಮೊಬೈಲ್, ಕ್ಯಾಮರಾಗಳಲ್ಲಿ ಸೆರೆ ಹಿಡಿಯುವುದು ಅಪರಾಧಿಗಳಂತೆ ಕಾಣುವುದೂ ಅಪರಾಧವಾಗಲಿದೆ. ಅಪರಾಧಿಗಳನ್ನು ಕೊಂಡೊಯ್ಯುವಾಗ ನೋಡುವಂತೆ ಕೊರೋನಾ ಶಂಕಿತರನ್ನು ಕ್ವಾರಂಟೈನ್ ಗೆ ಕರೆದೊಯ್ಯುವಾಗ ಮೊಬೈಲ್ ಗಳಲ್ಲಿ ಸೆರೆ ಹಿಡಿಯುವುದರಿಂದ ಅವರಿಗೆ ಭವಿಷ್ಯದಲ್ಲಿ ತೊಂದರೆಯಾಗುತ್ತದೆ. ಅವರನ್ನು ಸಾಮಾಜಿಕವಾಗಿ ಬಹಿಷ್ಕರಿಸಲಾಗುತ್ತಿದೆ. ಇದು ಅವರ ಮಾನಸಿಕ