ಕೊರೋನಾ ಮೂರನೇ ಅಲೆ ಇನ್ನಷ್ಟು ಭೀಕರ ಸಾಧ್ಯ್ತೆ!

ನವದೆಹಲಿ| Krishnaveni K| Last Updated: ಸೋಮವಾರ, 19 ಜುಲೈ 2021 (09:52 IST)
ನವದೆಹಲಿ: ಕೊರೋನಾ ಎರಡನೇ ಅಲೆಯಲ್ಲಿಯೇ ಪ್ರತಿನಿತ್ಯ ಸಾವಿರಾರು ಕೇಸ್, ಆಸ್ಪತ್ರೆ ಸಿಗದೇ ಒದ್ದಾಟ ನೋಡಿ ಜನ ಬೇಸತ್ತು ಹೋಗಿದ್ದಾರೆ. ಇದೀಗ ಮೂರನೇ ಅಲೆಯ ಭೀತಿಯಲ್ಲಿ ದೇಶವಿದೆ.

 
ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಐಸಿಎಂಆರ್ ನ ಉನ್ನತ ತಜ್ಞರ ಪ್ರಕಾರ ಮೂರನೇ ಅಲೆ ಮತ್ತಷ್ಟು ಭೀಕರವಾಗಿರಬಹುದು. ಒಂದೇ ದಿನ 1 ಲಕ್ಷ ಪ್ರಕರಣ ಕಂಡುಬರುವ ಸಾಧ‍್ಯತೆಯೂ ಇಲ್ಲದಿಲ್ಲ ಎಂದಿದ್ದಾರೆ.
 
ಮೂರನೇ ಅಲೆ ಆಗಸ್ಟ್ ಎರಡನೇ ಅಥವಾ ಕೊನೆಯ ವಾರದಲ್ಲಿ ಅಪ್ಪಳಿಸುವ ಸಾಧ‍್ಯತೆಯಿದೆ. ಇದರ ಹರಡುವಿಕೆಯೂ ಮೊದಲನೇ ಅಲೆಯನ್ನು ಹೋಲುವ ಸಾಧ‍್ಯತೆಯಿದೆ. ಲಸಿಕೆ ಹಾಕುವಲ್ಲಿ ಹಿನ್ನಡೆ, ಸುರಕ್ಷತೆ ಮರೆತು ಓಡಾಟ ಮೂರನೇ ಅಲೆಯ ಅಪಾಯ ಹೆಚ್ಚಿಸಿದೆ ಎಂದು ಐಸಿಎಂಆರ್ ನ ತಜ್ಞರು ಎಚ್ಚರಿಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :