ನವದೆಹಲಿ: ಕೊರೋನಾಗೆ ಲಸಿಕೆ ಕಂಡುಕೊಳ್ಳಲು ವಿಶ್ವದ ಎಲ್ಲಾ ರಾಷ್ಟ್ರಗಳೂ ಪೈಪೋಟಿಗೆ ಬಿದ್ದಿವೆ. ಇದರಲ್ಲಿ ಭಾರತವೂ ಹಿಂದೆ ಬಿದ್ದಿಲ್ಲ. ಪುಣೆಯಲ್ಲಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಪ್ರಾಯೋಗಿಕವಾಗಿ ಲಸಿಕೆಯನ್ನು ತಯಾರಿಸಿದ್ದು 30 ಕೋತಿಗಳ ಮೇಲೆ ಪ್ರಯೋಗಿಸಲಿದೆ.