ನವದೆಹಲಿ: ರಷ್ಯಾ ಈಗಾಗಲೇ ಕೊರೋನಾಗೆ ವ್ಯಾಕ್ಸಿನ್ ಕಂಡುಕೊಂಡಿರುವುದಾಗಿ ಘೋಷಿಸಿಕೊಂಡಿದೆ. ಜಗತ್ತಿನ ಹಲವು ರಾಷ್ಟ್ರಗಳು ಕೊರೋನಾ ತಡೆ ವ್ಯಾಕ್ಸಿನ್ ತಯಾರಿಯ ಅಂತಿಮ ಹಂತದಲ್ಲಿರುವುದಾಗಿ ಹೇಳಿಕೊಳ್ಳುತ್ತಿವೆ. ಭಾರತವೂ ಈ ಪಟ್ಟಿಯಲ್ಲಿದೆ.ಹಾಗಿದ್ದರೆ ಭಾರತದ ವ್ಯಾಕ್ಸಿನ್ ತಯಾರಿ ಎಲ್ಲಿಯವರೆಗೆ ಬಂದಿದೆ? ಈ ಮೊದಲು ಆಗಸ್ಟ್ 15 ರೊಳಗಾಗಿ ವ್ಯಾಕ್ಸಿನ್ ತಯಾರಿಸುವುದಾಗಿ ಭಾರತದ ತಜ್ಞರು ಗುರಿ ಹಾಕಿಕೊಂಡಿದ್ದರು. ಆದರೆ ಇನ್ನೂ ವ್ಯಾಕ್ಸಿನ್ ತಯಾರಿ ಅಂತಿಮ ಹಂತದಲ್ಲಿದೆಯಷ್ಟೇ.ಈಗಾಗಲೇ ಕೇಂದ್ರ ಆರೋಗ್ಯ ಸಚಿವಾಲಯ ತಜ್ಞರುಗಳೊಂದಿಗೆ ಸಭೆ ನಡೆಸಿದ್ದು, ಎಲ್ಲಾ ವರ್ಗದವರಿಗೂ