ಬೆಂಗಳೂರು: ಕೊರೋನಾ ಎಂಬ ಮಹಾಮಾರಿ ಮಾಡಿದ ಒಂದೇ ಒಂದು ಉಪಕಾರವೆಂದರೆ ಬಹುಶಃ ಇದುವೇ ಇರಬೇಕು. ಅದು ಭಾರತದಲ್ಲಿ ವರ್ಕ್ ಫ್ರಂ ಹೋಂ ಪರಿಕಲ್ಪನೆಯನ್ನು ಜನಪ್ರಿಯಗೊಳಿಸಿರುವುದು.ಈ ಮೊದಲು ಕೇವಲ ಐಟಿ-ಬಿಟಿ ಕಂಪನಿಗಳು ಮಾತ್ರ ಅಗತ್ಯವಿದ್ದಾಗ ಮಾತ್ರ ತಮ್ಮ ನೌಕರರಿಗೆ ಇಂತಹ ಸೌಲಭ್ಯ ಕೊಡುತ್ತಿತ್ತು. ಆದರೆ ಕೊರೋನಾ ಬಂದ ಮೇಲೆ ಹೆಚ್ಚಿನ ಕಂಪನಿಗಳು ವರ್ಕ್ ಫ್ರಂ ಹೋಂ ಪರಿಕಲ್ಪನೆಯನ್ನು ನೆಚ್ಚಿಕೊಂಡಿದೆ.ಮನೆಯಿಂದಲೇ ಮೀಟಿಂಗ್ ಅಟೆಂಡ್ ಮಾಡುವುದು, ಕ್ಲೈಂಟ್ ಗಳ ಜತೆ ವ್ಯವಹರಿಸುವುದು ಎಲ್ಲವೂ ನಡೆಯುತ್ತಿದೆ.