ಡೆಡ್ಲಿ ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಟಿಬೇಟಿಯನ್ ಕಾಲೋನಿಯತ್ತ ಜಿಲ್ಲಾಡಳಿತ ಕಣ್ಣು ನೆಟ್ಟಿದೆ. ಕೋವಿಡ್ -19 ಸೋಂಕು ಮುಂಜಾಗೃತಾ ಕ್ರಮವಾಗಿ ಉತ್ತರಕನ್ನಡ ಜಿಲ್ಲೆಯ ಮುಂಡಗೋಡದಲ್ಲಿರುವ ಟಿಬೇಟಿಯನ್ ಕಾಲೋನಿ ವ್ಯಾಪ್ತಿಯಲ್ಲಿ ಸಿಆರ್ಪಿಸಿ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಹರೀಶಕುಮಾರ್ ಕೆ. ಆದೇಶ ಹೊರಡಿಸಿದ್ದಾರೆ.ಮುಂಡಗೋಡ ತಹಶೀಲ್ದಾರ ಅವರ ಪರವಾನಿಗೆ ಇಲ್ಲದೇ ಮುಂಡಗೋಡ ಟಿಬೇಟಿಯನ್ ಕಾಲೋನಿಗೆ ಬೌದ್ಧ ಬಿಕ್ಷುಗಳು ಹಾಗೂ ಇನ್ನಿತರೆ ವ್ಯಕ್ತಿಗಳ ಆಗಮನ ಹಾಗೂ ನಿರ್ಗಮನವನ್ನು ನಿಷೇಧಿಸಿದ್ದಾರೆ. ದೀರ್ಘಾವಧಿಯಿಂದ ಅನ್ಯ ಕಾರಣಕ್ಕಾಗಿ