ಬೆಂಗಳೂರು: ಎಲ್ಲಿ ನೋಡಿದರೂ ಕೊರೋನಾದ್ದೇ ಸುದ್ದಿ. ಕೊರೋನಾ ಬಂದರೆ ನನ್ನ ಗತಿ ಏನು ಎಂದು ಎಲ್ಲರೂ ಆತಂಕಪಡುವಂತಾಗಿರುವುದು ಸಹಜ. ಹಾಗಂತ ಕೊರೋನಾ ಬಂದ ತಕ್ಷಣ ಸಾವೇ ಗತಿ ಎಂದಲ್ಲ.ಕೊರೋನಾ ಕೂಡಾ ಇತರ ವೈರಾಣುಗಳಂತೇ ಒಂದು ವೈರಾಣು ಎಂದುಕೊಂಡು ಧೈರ್ಯದಿಂದ ಎದುರಿಸಿದರೆ ನಾವು ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು.ಆದಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದರ ಜತೆಗೆ ಕೊರೋನಾ ಬಗೆಗಿನ ಭಯ ದೂರ ಮಾಡುವುದೂ ಅಗತ್ಯ. ಕೊರೋನಾ ಬಂದ ತಕ್ಷಣವೇ ವೈದ್ಯರ ಸಲಹೆ ಪಡೆದು ಚಿಕಿತ್ಸೆ