ನವದೆಹಲಿ: ಕೊರೋನಾ ಎಂಬ ಮಹಾಮಾರಿಯಿಂದ ಅದೆಷ್ಟೋ ಜನ ಉದ್ಯೋಗ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ ಅಂತಹವರು ಈಗ ಕೊಂಚ ನಿಟ್ಟುಸಿರುವ ಬಿಡುವ ಸುದ್ದಿ ಬಂದಿದೆ. ಲಾಕ್ ಡೌನ್ ವೇಳೆ ಹಲವರು ಉದ್ಯೋಗ ಕಳೆದುಕೊಂಡಿದ್ದರೂ ಜುಲೈ ಬಳಿಕ ಈ ನಿರುದ್ಯೋಗ ಪ್ರಮಾಣ ಕಡಿಮೆಯಾಗಿ, ಉದ್ಯೋಗಾವಕಾಶದ ಪ್ರಮಾಣ ಏರಿಕೆಯಾಗುತ್ತಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಎಕಾನಮಿ ಇನ್ ಇಂಡಿಯಾ (ಸಿಎಂಐಇ) ಅಂಕಿ ಅಂಶ ನೀಡಿದೆ.ಅದರಲ್ಲೂ ನಗರ ಭಾಗಗಳಲ್ಲಿ ಮತ್ತೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ