ಬೆಂಗಳೂರು: ರಾಜ್ಯದಲ್ಲಿ ಲಾಕ್ ಡೌನ್ 3 ಜಾರಿಯಲ್ಲಿರುವಾಗಲೂ ಕೊರೋನಾ ಪ್ರಕರಣ ದಿನೇ ದಿನೇ ಹೆಚ್ಚುತ್ತಿರುವುದರಿಂದ ರೆಡ್ ಝೋನ್ ಗೆ ಹೊಸ ವಿನಾಯ್ತಿ ನೀಡದೇ ಇರಲು ಸರ್ಕಾರ ತೀರ್ಮಾನಿಸಿದೆ. ಆರೆಂಜ್ ಮತ್ತು ಗ್ರೀನ್ ವಲಯಗಳಿಗೆ ರಿಲೀಫ್ ನೀಡಿರುವ ರಾಜ್ಯ ಸರ್ಕಾರ ರೆಡ್ ಝೋನ್ ಗಳಲ್ಲಿ ಯಥಾ ಸ್ಥಿತಿ ಮುಂದುವರಿಸಲು ತೀರ್ಮಾನಿಸಿದೆ.ಲಾಕ್ ಡೌನ್ 3 ಇನ್ನೂ ಒಂದು ವಾರ ಕಾಲವಾಧಿಯಿದ್ದು, ಅದಾದ ಬಳಿಕವೂ ರೆಡ್ ಝೋನ್ ನಲ್ಲಿ ಕಟ್ಟುನಿಟ್ಟು ಮುಂದುವರಿಯುವ ಸಾಧ್ಯತೆಯೇ ಹೆಚ್ಚು.