ಬೆಂಗಳೂರು: ಲಾಕ್ ಡೌನ್ ನಡುವೆ ಹೋಟೆಲ್ ಗಳನ್ನು ತೆರೆಯಲು ಅನುಮತಿ ನೀಡಬೇಕೆಂದು ಹೋಟೆಲ್ ಮಾಲಿಕರು ಒತ್ತಾಯಿಸುತ್ತಲೇ ಇದ್ದಾರೆ. ಈ ಬಗ್ಗೆ ಇಂದು ನಿರ್ಧಾರವಾಗಲಿದೆ. ಇಂದು ಹೋಟೆಲ್ ಮಾಲಿಕರ ಜತೆ ಸಿಎಂ ಯಡಿಯೂರಪ್ಪ ಸಭೆ ನಡೆಸಲಿದ್ದು, ಈ ಉದ್ಯಮ ಮತ್ತೆ ಮೊದಲಿನಂತೆ ತೆರೆಯಬೇಕೇ ಅಥವಾ ಈ ಮೊದಲಿರುವಂತೇ ಕೇವಲ ಪಾರ್ಸಲ್ ಗೆ ಮಾತ್ರ ಅವಕಾಶ ನೀಡಬೇಕೇ ಎಂಬಿತ್ಯಾದಿ ಬಗ್ಗೆ ತೀರ್ಮಾನವಾಗಲಿದೆ.ಹೋಟೆಲ್ ತೆರೆಯದೇ ಹಲವಾರು ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದಾರೆ. ಹೋಟೆಲ್ ಉದ್ಯಮ ಸಂಕಷ್ಟದಲ್ಲಿದೆ ಎಂಬುದು