ವಡೋದರ: ಕೊರೋನಾ ಎಂಬ ಮಹಾಮಾರಿ ಮನುಷ್ಯ ಮನುಷ್ಯರ ನಡುವಿನ ನಂಬಿಕೆಯನ್ನೇ ಇಲ್ಲವಾಗುವಂತೆ ಮಾಡಿದೆ. ಇದೀಗ ಗುಜರಾತ್ ನ ವಡೋದರಲ್ಲಿ ಪತಿರಾಯನೊಬ್ಬ ಕೊರೋನಾ ಭಯದಲ್ಲಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಮನೆಯಿಂದ ಹೊರಗಟ್ಟಿದ ಧಾರುಣ ಘಟನೆ ನಡೆದಿದೆ. ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಪತಿಯ ತಾಯಿಯನ್ನು ನೋಡಿಕೊಳ್ಳಲು ಪತ್ನಿ ಎರಡು ವಾರ ಆಸ್ಪತ್ರೆಯಲ್ಲಿ ತಂಗಿದ್ದಳು. ಈ ವೇಳೆ ಆಕೆಯ ಮಕ್ಕಳೂ ಜತೆಯಿದ್ದರು. ಆದರೆ ಮನೆಗೆ ಬಂದ ಮೇಲೆ ಆಕೆಗೆ ಜ್ವರ ಮತ್ತು ಉಸಿರಾಟದ