ಕೊರೋನಾ ತಡೆಯುವ ಹೊಸ ಸೀರೆ ಮಾರುಕಟ್ಟೆಗೆ ಆಗಮನ!

ಇಂಧೋರ್| Krishnaveni K| Last Modified ಶನಿವಾರ, 15 ಆಗಸ್ಟ್ 2020 (10:07 IST)
ಇಂಧೋರ್: ಕೊರೋನಾ ತಡೆಯಲು ರೋಗ ನಿರೋಧಕ ‍ಶಕ್ತಿ ದೇಹದಲ್ಲಿ ಚೆನ್ನಾಗಿರಬೇಕು, ಅದಕ್ಕಾಗಿ ಕಷಾಯಗಳು, ಪಾನೀಯಗಳು, ಆಹಾರ ವಸ್ತುಗಳನ್ನು ಸೇವಿಸಲು ಸಲಹೆ ನೀಡಲಾಗುತ್ತಿತ್ತು. ಆದರೆ ಇದೀಗ ಮಧ್ಯಪ್ರದೇಶದಲ್ಲಿ ರೋಗ ನಿರೋಧಕ ಶಕ್ತಿಯುಳ್ಳ ಸೀರೆ ಮಾರುಕಟ್ಟೆಗೆ ಬಂದಿದೆ!
 

ವಿಶಿಷ್ಟ ಆಯುರ್ವೇದಿಕ್ ಗಿಡಮೂಲಿಕೆಗಳನ್ನು ಬಳಸಿ ಮಾಡಿದ ರೋಗ ನಿರೋಧಕ ಶಕ್ತಿಯುಳ್ಳ ಸೀರೆಗೆ ಆಯುರ್ವಸ್ತ್ರ ಎಂದು ಹೆಸರಿಡಲಾಗಿದ್ದು, ಭಾರೀ ವೈರಲ್ ಆಗಿದೆ.
 
ಭೋಪಾಲ್ ನ ವಸ್ತ್ರ ವಿನ್ಯಾಸಕರು ಈ ವಿಶಿಷ್ಟ ಸೀರೆಯನ್ನು ತಯಾರು ಮಾಡಿದ್ದಾರೆ. ಈ ಸೀರೆ  ತಯಾರಿಸಲು ಲವಂಗ,  ಏಲಕ್ಕಿ, ಚಕ್ರಪಾಲ್, ಚಕ್ಕೆ, ಇತ್ಯಾದಿ ವಸ್ತುಗಳನ್ನು ಸಂಸ್ಕರಿಸಿ ಬಳಸಲಾಗಿದೆಯಂತೆ. ಈ ಸೀರೆಯ ಬೆಲೆ 3000 ರೂ.ಗಳಿಂದ ಆರಂಭವಾಗುತ್ತದೆ. ನಾಲ್ಕೈದು ಬಾರಿ ಸೀರೆ ತೊಳೆದರೂ ರೋಗ ನಿರೋಧಕ ಶಕ್ತಿ ಹಾಗೆಯೇ ಇರುತ್ತದೆ ಎಂಬುದು ತಯಾರಕರ ಅಭಿಪ್ರಾಯ.
ಇದರಲ್ಲಿ ಇನ್ನಷ್ಟು ಓದಿ :