ಕೊರೋನಾ ಸೋಂಕಿತರ ಪಟ್ಟಿಯಲ್ಲಿ ಚೀನಾಗಿಂತ ಒಂದೇ ಸ್ಥಾನ ಹಿಂದಿರುವ ಭಾರತ

ನವದೆಹಲಿ| Krishnaveni K| Last Modified ಬುಧವಾರ, 13 ಮೇ 2020 (09:52 IST)
ನವದೆಹಲಿ: ದಿನೇ ದಿನೇ ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಇದೀಗ ಜಾಗತಿಕ ಪಟ್ಟಿಯಲ್ಲಿ 12 ನೇ ಸ್ಥಾನದಲ್ಲಿದೆ.

 
ಅಂದರೆ ಮೊದಲು ಕೊರೋನಾ ಹರಡಿಸಿದ ಚೀನಾಗಿಂತ ಒಂದೇ ಸ್ಥಾನ ಹಿಂದಿದೆ. ಇದುವರೆಗೆ ಭಾರತದಲ್ಲಿ ಸೋಂಕಿತರಾದವರ ಸಂಖ್ಯೆ 74,281 ಕ್ಕೇರಿದೆ. ಚೀನಾದಲ್ಲಿ 84,018 ಮಂದಿ ಸೋಂಕಿತರಾಗಿದ್ದರು.
 
ಇದೀಗ ಹೊಸದಾಗಿ 3523 ಪ್ರಕರಣಗಳು ದಾಖಲಾಗಿದ್ದು, 75 ಸಾವಿರದ ಗಡಿಗೆ ಸಮೀಪದಲ್ಲಿದೆ. ಈ ಪೈಕಿ 24,386 ಮಂದಿ ಗುಣಮುಖರಾಗಿದ್ದರೆ 2415 ಮಂದಿ ಸಾವನ್ನಪ್ಪಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :