ಕೊರೋನಾ ಸೋಂಕಿತರ ಪಟ್ಟಿಯಲ್ಲಿ ಚೀನಾ ಹಿಂದಿಕ್ಕಿದ ಭಾರತ

ನವದೆಹಲಿ| Krishnaveni K| Last Modified ಶನಿವಾರ, 16 ಮೇ 2020 (09:36 IST)
ನವದೆಹಲಿ: ಕೊರೋನಾ ಮಹಾಮಾರಿ ಸೋಂಕಿತರ ಸಂಖ್ಯೆ ಭಾರತದಲ್ಲಿ 80 ಸಾವಿರ ಗಡಿ ದಾಟಿದ್ದು, ಮೊದಲು ಸೋಂಕು ಕಾಣಿಸಿಕೊಂಡಿದ್ದ ಚೀನಾವನ್ನೂ ಹಿಂದಿಕ್ಕಿದೆ.
 

ಚೀನಾದಲ್ಲಿ ಇಂದಿನವರೆಗೆ ಒಟ್ಟಾರೆ 81,970 ಪ್ರಕರಣಗಳು ಪತ್ತೆಯಾಗಿವೆ. ಭಾರತದಲ್ಲಿ ಇಂದಿನವರೆಗೆ ಸೋಂಕಿತರ ಸಂಖ್ಯೆ 86 ಸಾವಿರ ತಲುಪಿದೆ.
 
ಆದರೆ ಸಾವಿನ ಪ್ರಮಾಣ ಸಂಖ್ಯೆಯಲ್ಲಿ ಭಾರತದ ಪರಿಸ್ಥಿತಿ ಚೀನಾಕ್ಕಿಂತ ಉತ್ತಮವಾಗಿದೆ. ಹಾಗಿದ್ದರೂ ಲಾಕ್ ಡೌನ್ ಸಡಿಲಿಕೆ ಬಳಿಕ ಸೋಂಕಿತರ ಸಂಖ್ಯೆ ಮತ್ತಷ್ಟು ಹೆಚ್ಚಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಇದರಲ್ಲಿ ಇನ್ನಷ್ಟು ಓದಿ :