ಬೆಂಗಳೂರು: ಲಾಕ್ ಡೌನ್ ಎರಡನೇ ಭಾಗ ನಾಳೆಯಿಂದ ಬೆಂಗಳೂರಿನಲ್ಲಿ ಆರಂಭವಾಗಲಿದೆ. ಕೊರೋನಾ ನಿಯಂತ್ರಿಸಲು ಸರ್ಕಾರವೇನೋ ಈ ಒಂದು ವಾರ ಕಾಲ ಬೆಂಗಳೂರು ಲಾಕ್ ಡೌನ್ ಗೆ ತೀರ್ಮಾನಿಸಿದೆ. ಆದರೆ ಕೈಗಾರಿಕೆಗಳು ತಲೆಮೇಲೆ ಕೈ ಹೊತ್ತು ಕೂತಿವೆ. ಲಾಕ್ ಡೌನ್ ನಿಂದ ಚೇತರಿಸಿಕೊಂಡು ಈಗಷ್ಟೇ ಕೆಲಸ ಆರಂಭಿಸಿದ್ದ ಕೈಗಾರಿಕೆಗಳು ಹೊಸದಾಗಿ ಆರ್ಡರ್ ಪಡೆಯುವುದು, ಕಳುಹಿಸುವುದು ಎಂಬಿತ್ಯಾದಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿವೆ. ಆದರೆ ಈಗ ಏಕಾಏಕಿ ಮತ್ತೆ ಲಾಕ್ ಡೌನ್ ಆದರೆ ಕೈಗಾರಿಕಾ ಚಟುವಟಿಕೆ