ಜನತಾ ಕರ್ಫ್ಯೂಗೆ ಕಲ್ಯಾಣ ಕರ್ನಾಟಕ ಸ್ತಬ್ಧ : ಹುಡುಕಿದರೂ ಕಾಣದ ಜನ

ಕಲಬುರಗಿ| Jagadeesh| Last Updated: ಸೋಮವಾರ, 23 ಮಾರ್ಚ್ 2020 (12:07 IST)
ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ಜನತಾ ಕರ್ಫ್ಯೂಗೆ ರಾಜ್ಯದ ಪ್ರದೇಶ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ.

ಕಲ್ಯಾಣ ಕರ್ನಾಟಕದ ಪ್ರಮುಖ ಕೇಂದ್ರವಾಗಿರುವ ಕಲಬುರಗಿ ನಗರದಲ್ಲಿ ಬೆಳಗ್ಗೆಯಿಂದಲೇ ಜನತಾ ಕರ್ಫ್ಯೂಗೆ ಭಾರಿ ಬೆಂಬಲ ವ್ಯಕ್ತವಾಗಿದೆ. ಜನನಿಬಿಡ ಸೂಪರ್ ಮಾರ್ಕೆಟ್, ಬಸ್ ನಿಲ್ದಾಣ ಮಾರ್ಗ, ಸರದಾರ್ ವಲ್ಲಭಭಾಯ್ ಪಟೇಲ್, ಖರ್ಗೆ ರಿಂಗ್ ರೋಡ್, ರಾಮಮಂದಿರ ರಸ್ತೆಗಳಲ್ಲಿ ಹುಡುಕಾಡಿದರೂ ಯಾರೊಬ್ಬರು ರಸ್ತೆಯಲ್ಲಿ ಕಂಡುಬರಲಿಲ್ಲ.

ಬೀದರ್ ನಲ್ಲಿಯೂ  ಸಾರಿಗೆ ಸಂಚಾರ ಸ್ಥಗಿತಗೊಂಡಿತ್ತು. ದೇವಾಲಯ, ಮಂದಿರ, ಮಸಿದಿಗಳಿಗೆ ಬೀಗ ಹಾಕಿ ಜನತಾ ಬಂದ್ ಗೆ ಬೆಂಬಲ ವ್ಯಕ್ತವಾಯಿತು.

ಇನ್ನು, ಯಾದಗಿರಿ, ಕೊಪ್ಪಳ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿಯೂ ಜನತಾ ಬಂದ್ ಗೆ ಭಾರೀ ಬೆಂಬಲ ವ್ಯಕ್ತವಾಗಿದೆ.


ಇದರಲ್ಲಿ ಇನ್ನಷ್ಟು ಓದಿ :