ಬೆಂಗಳೂರು: ಕೊರೋನಾವೈರಸ್ ಹರಡದಂತೆ ಪ್ರಧಾನಿ ಮೋದಿ ಕರೆ ನೀಡಿರುವ ಜನತಾ ಕರ್ಫ್ಯೂ ಇಂದು ದಿನವಿಡೀ ಜಾರಿಯಲ್ಲಿರಲಿದೆ. ಭಾನುವಾರದ ದಿನ ಯಾವತ್ತಿನಂತೇ ಔಟಿಂಗ್ ಹೋಗಲು ಸಾಧ್ಯವಾಗದೇ ಇರುವಾಗ ಮನೆಯಲ್ಲೇ ಕೂತು ಏನು ಮಾಡಬಹುದು?ಅಯ್ಯೋ ದಿನವಿಡೀ ಇಂದು ಮನೆಯಲ್ಲೇ ಕೂರಬೇಕಲ್ಲಾ ಎಂದು ಕೊರಗಬೇಡಿ. ಈ ದಿನವನ್ನು ನಿಮ್ಮ ಮನೆಯವರ ಜತೆ ಖುಷಿಯಾಗಿ, ಕ್ರಿಯಾತ್ಮಕವಾಗಿ ಕಳೆಯಲು ಬಳಸಿಕೊಳ್ಳಿ. ಇದರಿಂದ ದೇಶಕ್ಕೂ ಉತ್ತಮ, ನಿಮಗೂ ಉತ್ತಮ. ಮನೆ ಕ್ಲೀನಿಂಗ್ ಮಾಡುವ ಕೆಲಸವಿದ್ದರೆ ಇಂದಿಗೆ ಮೀಸಲಿಡಿ. ಗಂಡು