ಕೊರೋನಾ ಭೀತಿ: ಕನಿಕಾ ಕಪೂರ್ ನಿಂದ ದ.ಆಫ್ರಿಕಾ ಕ್ರಿಕೆಟಿಗರಿಗೂ ಕುತ್ತು?

ಮುಂಬೈ| Krishnaveni K| Last Updated: ಸೋಮವಾರ, 23 ಮಾರ್ಚ್ 2020 (11:22 IST)
ಮುಂಬೈ: ಕೊರೋನಾ ಬಾಧಿತೆಯಾಗಿರುವ ಬಾಲಿವುಡ್ ಗಾಯಕಿ ಕನಿಕಾ ಕಪೂರ್ ಉಳಿದುಕೊಂಡಿದ್ದ ಹೋಟೆಲ್ ನಲ್ಲಿಯೇ ದ.ಆಫ್ರಿಕಾ ಕ್ರಿಕೆಟಿಗರೂ ಉಳಿದುಕೊಂಡಿದ್ದರು ಎಂಬ ಆಘಾತಕಾರಿ ಅಂಶ ಬಯಲಾಗಿದೆ.

 
ವಿದೇಶದಿಂದ ಬಂದ ಬಳಿಕ ಸರಿಯಾಗಿ ತಪಾಸಣೆ ನಡೆಸದೇ ಪಾರ್ಟಿ ಆಯೋಜಿಸಿ ಹಲವರಿಗೆ ಕೊರೋನಾ ಹರಡಲು ಕಾರಣರಾಗಿದ್ದ ಕನಿಕಾ ಕಪೂರ್ ಮಾರ್ಚ್ 11 ರಂದು  ಲಕ್ನೋದಲ್ಲಿ ಹೋಟೆಲ್ ಒಂದರಲ್ಲಿ ತಂಗಿದ್ದರು.
 
ಅದೇ ಸಮಯದಲ್ಲಿ ದ.ಆಫ್ರಿಕಾ ಕ್ರಿಕೆಟಿಗರೂ ಅದೇ ಹೋಟೆಲ್ ನಲ್ಲಿದ್ದರು ಎನ್ನಲಾಗಿದೆ. ಇದೀಗ ಅಧಿಕಾರಿಗಳು ಕನಿಕಾ ಜತೆ ಸಂಪರ್ಕ ಹೊಂದಿದ್ದಾರೆ ಎನ್ನಲಾದ ವ್ಯಕ್ತಿಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಇದರಲ್ಲಿ ಇನ್ನಷ್ಟು ಓದಿ :