ಬೆಂಗಳೂರು: ಕೊರೋನಾದಿಂದಾಗಿ ಜನರ ಜೀವನ ಶೈಲಿಯೇ ಬದಲಾಗಿದೆ. ಅಷ್ಟೇಕೆ ಮದುವೆ ಸಮಾರಂಭಗಳಿಗೂ ಕೊರೋನಾ ಭೀತಿ ತಟ್ಟಿದೆ. ಮೇ 17 ರ ನಂತರ ಹೊಸ ಲಾಕ್ ಡೌನ್ ನಿಯಮ ಜಾರಿಗೆ ಬರಲಿದ್ದು, ರಾಜ್ಯ ಸರ್ಕಾರ ಮದುವೆ ಸಮಾರಂಭಗಳಿಗೆ ಪ್ರತ್ಯೇಕ ನಿಯಮ ರೂಪಿಸಿದೆ.ಇದುವರೆಗೆ ಆಯಾ ಜಿಲ್ಲಾಧಿಕಾರಿಗಳ ಒಪ್ಪಿಗೆಯೊಂದಿಗೆ ಗರಿಷ್ಠ 20 ಮಂದಿಗೆ ಮಾತ್ರ ಮದುವೆ ಸಮಾರಂಭದಲ್ಲಿ ಭಾಗವಹಿಸುವ ಅವಕಾಶವಿತ್ತು. ಅದೀಗ ಕೊಂಚ ಏರಿಕೆಯಾಗಿದ್ದು, ಇನ್ನು ಮುಂದೆ 50 ಮಂದಿಗೆ ಸಮಾರಂಭದಲ್ಲಿ ಭಾಗವಹಿಸಲು ಅವಕಾಶ