ಮತ್ತೊಬ್ಬ ಸ್ಯಾಂಡಲ್ ವುಡ್ ನಟಿಗೆ ಕೊರೋನಾ ಪಾಸಿಟಿವ್

ಬೆಂಗಳೂರು| Krishnaveni K| Last Updated: ಮಂಗಳವಾರ, 6 ಏಪ್ರಿಲ್ 2021 (11:04 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಕಾವ್ಯಾ ಶೆಟ್ಟಿಗೆ ಕೊರೋನಾ ಪಾಸಿಟಿವ್ ಆಗಿದೆ. ಇದೀಗ ನಟಿ ಕಾವ್ಯಾ ಹೋಂ ಕ್ವಾರಂಟೈನ್ ನಲ್ಲಿದ್ದಾರೆ ಎಂದು ತಿಳಿದುಬಂದಿದೆ.

 
ಇದರೊಂದಿಗೆ ಮತ್ತೊಬ್ಬ ಸೆಲೆಬ್ರಿಟಿಗೆ ಕೊರೋನಾ ಸೋಂಕು ತಗುಲಿದಂತಾಗಿದೆ. ನನಗೆ ಕೊರೋನಾ ಸೋಂಕು ತಗುಲಿದ್ದು, ಹೋಂ ಕ್ವಾರಂಟೈನ್ ನಲ್ಲಿದ್ದೇನೆ. ನನ್ನ ಸಂಪರ್ಕಕ್ಕೆ ಬಂದವರೆಲ್ಲಾ ತಕ್ಷಣವೇ ಪರೀಕ್ಷೆಗೊಳಪಡಿ ಎಂದು ಕಾವ್ಯಾ ಹೇಳಿದ್ದಾರೆ.
 
ಇತ್ತೀಚೆಗಷ್ಟೇ ಪ್ರಜ್ವಲ್ ದೇವರಾಜ್, ಅವರ ಪತ್ನಿ ರಾಗಿಣಿ ಚಂದ್ರನ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾಗೂ ಕೊರೋನಾ ಪಾಸಿಟಿವ್ ಆಗಿತ್ತು. ಇದೀಗ ಕಾವ್ಯಾ ಸರದಿ. ಇದರೊಂದಿಗೆ ಕೊರೋನಾ ತೀವ್ರ ಸ್ವರೂಪ ಪಡೆದಿರುವುದು ಪಕ್ಕಾ ಆಗಿದೆ.
ಇದರಲ್ಲಿ ಇನ್ನಷ್ಟು ಓದಿ :