ನವದೆಹಲಿ : ಮೊದಲೇ ಕೋವಿಡ್ ಸೋಂಕಿನಿಂದ ಭಯಗೊಂಡಿರುವ ಜನರಲ್ಲಿ ಇನ್ನಷ್ಟು ಭೀತಿ ಮೂಡುವ ಅನೇಕ ಸಂಗತಿಗಳನ್ನು ಸಂಶೋಧಕರು ಹೊರಹಾಕುತ್ತಲೇ ಇದ್ದಾರೆ. ಕೋವಿಡ್ ಸೋಂಕಿನಿಂದಾಗಿ ಪುರುಷರಲ್ಲಿ ಲೈಂಗಿಕ ಸಾಮರ್ಥ್ಯ ಕ್ಷೀಣಿಸಲಿದೆ ಎಂದು ಅಮೆರಿಕದ ಮಿಯಾಮಿ ವಿವಿಯ ಸಂಶೋಧಕರ ತಂಡವೊಂದು ತಿಳಿಸಿದೆ.