ಬೆಂಗಳೂರು: ಲಾಕ್ ಡೌನ್ ನಿಂದಾಗಿ ಕಳೆದ ಕೆಲವು ದಿನಗಳಿಂದ ಮದ್ಯಪ್ರಿಯರಿಗೆ ಮದ್ಯದಂಗಡಿ ತೆರೆಯದೇ ಏನೋ ಕಳೆದುಕೊಂಡ ಫೀಲಿಂಗ್.. ಆದರೆ ಸೋಮವಾರದಿಂದ ಮದ್ಯದಂಗಡಿ ಓಪನ್ ಆಗುತ್ತಿರುವ ಸುದ್ದಿ ಕೇಳಿ ನಿಧಿ ಸಿಕ್ಕಿದ ಹಾಗಾಗಿತ್ತು. ಟವೆಲ್ ಹಾಕಿ ಬಾರ್ ಮುಂದೆ ತಮ್ಮ ಆಸನ ಕಾದಿರಿಸಿ ಒಂದೊಂದು ಬಾಟಲ್ ತೆಗೆದುಕೊಂಡು ಹೋದ ಖುಷಿಯೇನು, ಹುಡುಗಿಯರೂ ತಾ ಮುಂದು ಎಂಬಂತೆ ಎತ್ತಿಕೊಂಡು ಹೋಗಿದ್ದೇನು?.. ಅಬ್ಬಾ ಒಂದಾ.. ಎರಡಾ..!ಈ ರೀತಿ ಬಹಳ ದಿನಗಳ ನಂತರ ತೀರ್ಥ ಸಿಕ್ಕಿದ