ಬೆಂಗಳೂರು: ಕೊರೋನಾವೈರಸ್ ಬಾರದಂತೆ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿ ಇದೀಗ ಎರಡನೇ ಅವಧಿ ಮುಕ್ತಾಯದ ಹಂತಕ್ಕೆ ಬಂದಿದೆ. ಆದರೆ ಇನ್ನೊಂದು ಅವಧಿಗೆ ಲಾಕ್ ಡೌನ್ ಮಾಡುವ ಬಗ್ಗೆಯೂ ಮಾತುಗಳು ಕೇಳಿಬರುತ್ತಿದೆ.ಇತ್ತೀಚೆಗೆ ಇನ್ ಫೋಸಿಸ್ ಅಧ್ಯಕ್ಷ ನಾರಾಯಣ ಮೂರ್ತಿಯವರು, ಹೀಗೇ ಲಾಕ್ ಡೌನ್ ಮುಂದುವರಿಸುತ್ತಾ ಬರುವುದರಿಂದ ಭಾರತದಲ್ಲಿ ಹಸಿವಿನಿಂದ ಸಾಯುವವರ ಸಂಖ್ಯೆಯೇ ಹೆಚ್ಚಳವಾಗಲಿದೆ ಎಂದಿದ್ದರು.ಅವರ ಮಾತಿನಲ್ಲೂ ಸತ್ಯವಿಲ್ಲದಿಲ್ಲ. ಯಾಕೆಂದರೆ ಲಾಕ್ ಡೌನ್ ನಿಂದಾಗಿ ಈಗಾಗಲೇ ಹಲವು ಸಣ್ಣ ಉದ್ದಿಮೆಗಳು ಬಾಗಿಲು