ಬೆಂಗಳೂರು: ಲಾಕ್ ಡೌನ್ ಎಂದು ಜನತೆ ಮನೆಯಲ್ಲೇ ಬಂಧಿಯಾಗಿ ಎಷ್ಟೋ ದಿನ ಕಳೆದಿದೆ. ಇನ್ನೂ ಎರಡು ವಾರ ಕಾಲ ಲಾಕ್ ಡೌನ್ ವಿಸ್ತರಣೆಯಾಗಿದೆ. ಹೀಗಿರುವಾಗ ಮನೆಯಲ್ಲೇ ಬಂಧಿಯಾಗಿರುವವರ ಮಾನಸಿಕ ಆರೋಗ್ಯವೂ ಕ್ಷೀಣಿಸುತ್ತಿದೆ. ಮಹಿಳೆಯರು ವಿನಾಕಾರಣ ಮನೆಯವರ ಮೇಲೆ ಸಿಡುಕುವುದು, ಕೋಪಗೊಳ್ಳುವುದು, ಬೇಗನೇ ಅಳುವುದು ಇತ್ಯಾದಿ ಖಿನ್ನತೆಯ ಲಕ್ಷಣ ತೋರಿದರೆ ಪುರುಷರಿಗೆ ಭವಿಷ್ಯದ ಭಯ ಕಾಡುತ್ತಿದೆ.ಇದೆಲ್ಲವೂ ಮಾನಸಿಕ ಖಿನ್ನತೆಗೆ ಕಾರಣವಾಗುತ್ತಿದೆ. ಲಾಕ್ ಡೌನ್ ಮುಗಿದ ಮೇಲೂ ಮಾನಸಿಕ ಸ್ವಾಸ್ಥ್ಯ ಕೆಡುವ ಅನೇಕ